ಇಮೇಲಿನಲ್ಲಿ ಬಿಡುಗಡೆ ಆಗಿದೆ. ಅದನ್ನು ಲೋಕಾರ್ಪಣೆ ಮಾಡುವುದಷ್ಟೇ ನಮ್ಮ ಕೆಲಸ.
ಲೇಖಕರ ಹೆಸರು, ಊರು, ಕುಲಗೋತ್ರ ಇಲ್ಲದೆ ಬಂದ ಈ ಹಾಡನ್ನು ಯಥಾವತ್ತಾಗಿ ಇಲ್ಲಿ
ದಾಖಲಿಸುತ್ತಿದ್ದೇವೆ.
ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ
ನಿನ್ನ ಮುಗಿಲ ಸಾಲೇ, ಮನೆಯ ಗೋಡೆ ಉರುಳಿದ ಮೇಲೆ
ಸುರಿವ ರಭಸದ ಜಡಿ ಮಳೆಗೆ ನೀರು ತುಂಬಿದೆ
ಯಾವ ಹೊತ್ತಿನಲ್ಲಿ ಯಾವ ರೂಮು ಕೆರೆಯಾಗುವುದೋ
ಯಾವ ಪೈಪು ಕುಡಿಯೊಡೆಯುವುದೋ ತಿಳಿಯದಾಗಿದೆ
ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ
ಭುವಿ ಕೆನ್ನೆ ತುಂಬಾ ಮಳೆಯು ಸುರಿದ ಮುತ್ತಿನ ಗುರುತು
ನಮ್ಮ ರಸ್ತೆ ತುಂಬಾ ಹೊಳೆವ ಕೆಂಪು ಕೆಸರಿನ ಗುರುತು
ಹೆಜ್ಜೆ ಇಟ್ಟರೆ ಜಾರುವ ಸದ್ದು ಕಾಲು ಗಾಯವೋ
ಮನೆಯ ಮುಂದಿನಿಂದ ನೀರು ಚೆಲ್ಲಿ ನಿಂತೆ ನಾನು
ಉಕ್ಕಿ ಉಕ್ಕಿ ಬರುವ ಜಲವು ಏನು ಕೋಡಿಯೋ
ಯಾವ ಕಾರಿನಿಂದ ಯಾರ ಮೇಲೆ ನೀರೆರಗುವುದೋ
ಯಾವ ಹನಿಗಳಿಂದ ಯಾವ ನೆಲವು ಕೆಸರಾಗುವುದೋ
ಯಾವ ಕೆಸರಲ್ಯಾರ ಹೆಸರೋ ಯಾರು ಬರೆದರೋ
ಯಾವ ಕಪ್ಪು ಬಣ್ಣದ ಕೊಡೆಯು ಯಾರ ಕೈಯಿನಲ್ಲರಳುವುದೋ
ಯಾರ ತಲೆಯ ಮೇಲೇರುವುದೋ ಯಾರು ಬಲ್ಲರು
ಒಲವ ಮಳೆಯ ಮಾಮ ನಗುತ್ತಾ ಬಂದ ಮನೆಯಂಗಳಕೆ
ಮಬ್ಬು ಬೆಳಕಿನಲ್ಲಿ ಒಂದು ಕಾಲು ಗುಂಡಿಯ ಒಳಗೆ
ಒಗೆದ ಬಟ್ಟೆಯಲ್ಲಾ ರಾಡಿ ಏನು ಮೋಡಿಯೋ
ದೊಡ್ಡ ಮೋರಿಯಲ್ಲಿ ಕಳೆದು ಹೋಗೋ ದುಃಖವ ನೆನೆದು
ಇನ್ನೂ ಇಲ್ಲೇ ನಿಂತಿದೆ ನೀರು ಏನು ಮಾಡಲಿ